ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಹಾಗೂ ಸಮತಾ ಅಧ್ಯಯನ ಕೇಂದ್ರ, ಮೈಸೂರು ಸಹಯೋಗದೊಂದಿಗೆ ಎರಡು ದಿನದ ಕಾವ್ಯ ಕಮ್ಮಟವನ್ನು ಆಯೋಜಿಸಲಾಗಿದೆ. ಹಿರಿಯ ಕವಯಿತ್ರಿ ಪ್ರತಿಭಾ ನಂದಕುಮಾರ್ ಕಮ್ಮಟದ ನಿರ್ದೇಶಕರಾಗಿರುತ್ತಾರೆ.
ದಿನಾಂಕ : ಮೇ 31 ಹಾಗೂ ಜೂನ್ 1
ಸ್ಥಳ: ಇಂಟರ್ನ್ಯಾಷನಲ್ ಯೂತ್ ಹಾಸ್ಟೆಲ್, ಗೋಕುಲಂ, ಮೈಸೂರು
ನಿಯಮಗಳು:
1 ಕಮ್ಮಟದಲ್ಲಿ ಭಾಗವಹಿಸಲು ಆಸಕ್ತಿಯಿರುವ ಲೇಖಕಿಯರು ಒಂದಾದರೂ ಕವನ ಸಂಕಲನ ಹೊರತಂದಿರಬೇಕು ಅಥವಾ ಕವನಗಳನ್ನು ಪ್ರಕಟ ಮಾಡಿರಬೇಕು.
2 ಕೇವಲ 30 ಜನಕ್ಕೆ ಮಾತ್ರ ಈ ಅವಕಾಶ ಇರುವುದರಿಂದ ಮೊದಲು ನೋಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತದೆ.
3 ಕಮ್ಮಟದಲ್ಲಿ ಭಾಗವಹಿಸಿದವರು ಎರಡೂ ದಿನ ಶಿಬಿರದಲ್ಲಿಯೇ ಇರಬೇಕು.
4 ನೋಂದಣಿ ಶುಲ್ಕ 500 ರೂ ಇದ್ದು, ನೋಂದಣಿ ಸಮಯದಲ್ಲಿ ಪಾವತಿಸಬೇಕು. ಯಾವುದೇ ಕಾರಣದಿಂದ ಭಾಗವಹಿಸಲು ಸಾಧ್ಯವಾಗದೇ ಇದ್ದರೆ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.
5 ಜಿಲ್ಲಾವಾರು ಪ್ರತಿನಿಧಿಗಳಿಗೆ ಅವಕಾಶ ನೀಡುವ ಆದ್ಯತೆ ಇರುವುದರಿಂದ ಶಿಬಿರಾರ್ಥಿಗಳ ಅಂತಿಮ ಆಯ್ಕೆಯ ನಿರ್ಧಾರ ಕಲೇಸಂನದು.
6 ಶಿಬಿರಾರ್ಥಿಗಳಿಗೆ ಕೆಲವು ಪಠ್ಯ ಸಾಮಗ್ರಿ(study material),ಬ್ಯಾಗು, ಪೆನ್ನು ಮತ್ತು ನೋಟ್ ಬುಕ್ ನೀಡಲಾಗುತ್ತದೆ.
7 ಶಿಬಿರಾರ್ಥಿಗಳಿಗೆ ಯಾವುದೇ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಎರಡು ದಿನದ ತಿಂಡಿ, ಊಟ ಮತ್ತು ವಸತಿ ಉಚಿತವಾಗಿರುತ್ತದೆ.
ಗೂಗಲ್ ಫಾರ್ಮ್ ಅನ್ನು ಸದ್ಯದಲ್ಲಿಯೇ ಹಾಕುತ್ತೇವೆ. ಆಸಕ್ತರು ತಕ್ಷಣ ಅದನ್ನು ತುಂಬಿ ಕಳಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸರ್ವಮಂಗಳಾ: 9448818900
ಸುಮಾ ಸತೀಶ್: 9481480220