ಮಾಲತಿ, ವೇದಾಗೆ ಅನುಪಮಾ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘ ನೀಡುವ “ಅನುಪಮಾ ಪ್ರಶಸ್ತಿ”ಗೆ 2025ನೇ ಸಾಲಿನಲ್ಲಿ ಲೇಖಕಿ ಎ.ಪಿ. ಮಾಲತಿ ಹಾಗೂ 2026ನೇ ಸಾಲಿನಲ್ಲಿ ಲೇಖಕಿ ಎಂ.ಎಸ್. ವೇದಾ ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯ ಕ್ರಮ ಆಗಸ್ಟ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಆರ್. ಸುನಂದಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರ    ಎ.ಪಿ. ಮಾಲತಿ ಎಂ.ಎಸ್. ವೇದಾ

ಕಲೆಸಂ, ಬೆಂಗಳೂರು ಸಹಯೋಗದಲ್ಲಿ ಮಂಡ್ಯದಲ್ಲಿ ಜೂನ್ 27 , 28 ರಂದು ನಡೆದ ಮಂಡ್ಯ ಜಿಲ್ಲಾ ಲೇಖಕಿಯರ ‌ಮೊದಲ ಸಮ್ಮೇಳನ ದ ಉದ್ಘಾಟನಾ ಸಮಾರಂಭದ ಪತ್ರಿಕಾ ವರದಿಗಳು

ಸಮ್ಮೇಳನದ ಸಮಾರೋಪ ಸಮಾರಂಭದ (ಮೊದಲ ದಿನ)ಪತ್ರಿಕಾ ವರದಿಗಳು   ಸಮ್ಮೇಳನದ ಸಮಾರೋಪ ಸಮಾರಂಭದ (ಎರಡನೆಯ ದಿನ)ಪತ್ರಿಕಾ ವರದಿಗಳು

ಕಲೆಸಂ 2024-25ನೇ ಸಾಲಿನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕ ಪ್ರಶಸ್ತಿ, ನಳಿನಿ ಮೂರ್ತಿ ಪ್ರಶಸ್ತಿ ಪ್ರದಾನ ಹಾಗೂ ವೆಬ್‌ಸೈಟ್ ಬಿಡುಗಡೆ ಕಾರ್ಯಕ್ರಮ. ಕರ್ನಾಟಕ ಲೇಖಕಿಯರ ಸಂಘದ 24 – 25 ನೆಯ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಿನಾಂಕ 9 – 04 – 2026, ಗುರುವಾರದಂದು ಮಧ್ಯಾಹ್ನ 2.30 ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಸಬಿಹಾ ಭೂಮಿಗೌಡ ಅವರು ಮಾತನಾಡಿದರು. ಸುಮಾರು 37 – 38 ವರ್ಷಗಳ ಕಲೇಸಂನ ಒಡನಾಟವನ್ನು ಸ್ಮರಿಸಿದರು. ಲೇಖಕಿಯರ ಸಂಘವು ಆರಂಭದಿಂದಲೂ […]